Radha Radha Lyrics In Kannada- Brindhavihari | Sid Sriram

Radha Radha Lyrics In Kannada

Song: Radha Radha
Album: Brindavihari
Artist: Chinmayi, Sid Sriram
Lyrics: Kaviratna V Nagendra Prasad
Music: Hesham Abdul Wahab
Label: Anand Audio

Radha Radha Lyrics In Kannada

ಹದಿನಾರು ಸಾವಿರ ಗೋಪಾಲ ಸ್ತ್ರೀಯರ
ಚೆಲುವನ್ನು ಮೀರಿದ ರಾಧಿಕೇ
ಹದಿನಾಲ್ಕು ಲೋಕದ ಮನಸೋರೆ ಮಾಡುತ್ತಾ
ನನಗಾಗಿ ಜಾರಿದ ತಾರಿಕೆ

ನಿಂತಲೇ ವಾಲುವಾ ಗಾರೂಡಿ ಆಗಿದೆ
ಇದು ಯಾವ ಮಾಯಾ ಮಂತ್ರಾನೋ
ಕುಂತಲೇ ತೇಲುವಾ ಸಂಭ್ರಮ ಮೂಡಿದೆ
ಬಿಸಿಲಲ್ಲಿ ಮಳೆಯ ಮಿಲನಾನೋ

ರಾಧಾ ರಾಧಾ ನಿನ್ನ ಮೌನ ಸಂಭಾಷಣೆ
ಜೀವದ ಆಕರ್ಷಣೆ ನನ್ನಾನೆ
ಜೀವದಲಿ ಧಾರಾ ಧಾರಾ
ನಿನ್ನ ಮೌನ ಸಂವೇದನೆ
ಭಾವ ಸಂತರ್ಪಣೆ ನನ್ನಾನೆ

ಮದ್ದೆನು ಇಲ್ಲದೆ ಮದವೇರಿ ನಿಂತಿರೋ
ಮದ್ದಾನೆ ನಾನು ಆಗೋದೆ
ಮಕರಂದ ಹೀರುತ್ತಾ ಮೈ ತುಂಬಿಕೊಂಡಿರೋ
ದುಂಬಿಯ ಹಾಗೆ ನಾನಾದೆ

ನಾನಿನ್ನ ಹೆಸರನ್ನೇ ಗುನುಗುನುಗಿದೆ
ಕುಡಿದಂತೆ ರಾಮ ರಸಾ ಓ
ನಿಂತಲ್ಲೇ ಭೂಮಿನಾ ಸುತ್ತಿದೆ
ಈ ಪಾದ ಪಾದರಸಾ

ರಾಧಾ ರಾಧಾ ನಿನ್ನ ಮೌನ ಸಂಭಾಷಣೆ
ಜೀವದ ಆಕರ್ಷಣೆ ನನ್ನಾನೆ
ಜೀವದಲಿ ಧಾರಾ ಧಾರಾ
ನಿನ್ನ ಮೌನ ಸಂವೇದನೆ
ಭಾವ ಸಂತರ್ಪಣೆ ನನ್ನಾನೆ

ಮನಸೂರ ದಾರಿಗೆ ಕನಸೂರ ಮಲ್ಲಿಗೆ
ಮೃದುವಾಗಿ ಹಾಸುವಾ ಚಾಳಿಯೋ
ಹರೆಯೂರ ತೇರಿಗೆ ತುಸು ಗಂಪು ಕೆಡಗೆ
ಮನಸಾರೆ ಚೆಲ್ಲುವಾ ಮೋಡಿಯೋ

ಜೀವವೇ ಒಂದರಾ ಪ್ರೇಮದ ನಂತರಾ
ಜಗವೆಲ್ಲ ಜಂತರ ಮಂತರವೋ
ಸುಮ್ಮನೆ ಇದ್ದರು ಏನನೋ ಹೇಳುವಾ
ಪ್ರತಿಮೆಗಳ ಹಾಗೆ ನನ್ನೊಳವೋ

ರಾಧಾ ರಾಧಾ ನಿನ್ನ ಮೌನ ಸಂಭಾಷಣೆ
ಜೀವದ ಆಕರ್ಷಣೆ ನನ್ನಾನೆ
ಜೀವದಲಿ ಧಾರಾ ಧಾರಾ
ನಿನ್ನ ಮೌನ ಸಂವೇದನೆ
ಭಾವ ಸಂತರ್ಪಣೆ ನನ್ನಾನೆ

ಆ.. ಆ..

Leave a Reply

Your email address will not be published. Required fields are marked *